Index   ವಚನ - 143    Search  
 
ನುಡಿತಪ್ಪಿನಿಂದ ನೂರೊಂದು ಜನ್ಮಕ್ಕೆ ಬಪ್ಪ. ನಡೆತಪ್ಪಿನಿಂದ ನಾನಾಯೋನಿಗೆ ತೊಳಲಿದ. ಒಡಲ ಆಶ್ಚರ್ಯಕೆ ಒಂದೊಂದು ಮಹುಮತಿಯಂ ಮಾಳ್ಪ. ಕಡೆಯಿಲ್ಲದ ಕರ್ಮದ ಧರ್ಮವ ಹೊಂದುವುದಯ್ಯಾ. ಬೀಳುವರೆ ಜಡನಾಯಿತು, ದೇಹ ದೇವಾಲಯವಾಗದ ಕೆಟ್ಟಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.