Index   ವಚನ - 148    Search  
 
ಆಕಾರವೆ ಭಕ್ತ, ನಿರಾಕಾರವೆ ಮಹೇಶ್ವರ ಸಹಕಾರವೆ ಪ್ರಸಾದಿ, ಸನ್ಮತವೆ ಪ್ರಾಣಲಿಂಗಿ ಲೋಕವಿರಹಿತನೆ ಶರಣ, ಈ ಭ್ರಾಂತುವಿನ ಬಲೆಯೊಳಗೆ ಸಿಲುಕದಾತ ಐಕ್ಯ. ಅದೆಂತೆಂದರೆ- ಪೃಥ್ವಿ ಈಗಲೆ ಭಕ್ತ, ಅಪ್ಪು ಈಗಲೆ ಮಹೇಶ್ವರ ಅಗ್ನಿ ಈಗಲೆ ಪ್ರಸಾದಿ, ವಾಯು ಈಗಲೆ ಪ್ರಾಣಲಿಂಗಿ ಆಕಾಶ ಈಗಲೆ ಶರಣ, ಈ ಪಂಚತತ್ವದೊಳಗೆ ಬೆಳಗು ಕತ್ತಲೆ ಐಕ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.