Index   ವಚನ - 155    Search  
 
ರೇವಣಸಿದ್ಧೇಶ್ವರ ಮರುಳಸಿದ್ಧೇಶ್ವರ ಏಕೋರಾಮೇಶ್ವರ ಪಂಡಿತಾರಾಧ್ಯರೇ ನಿಮ್ಮ ಚಿನ್ನದ ಲಿಂಗ, ಬೆಳ್ಳಿಯಲಿಂಗ, ತಾಮ್ರದಲಿಂಗ[ಶಿಲೆಯಲಿಂಗ?] ಏನಾದುವೋ? ವೆಚ್ಚಕ್ಕಿಲ್ಲದಿದ್ದರೆ ಮಾರಿಕೊಂಡಿರೊ? ಒತ್ತೆ ಹಾಕಿಕೊಂಡಿರೊ? ಕರಗಿಸಿ ವಸ್ತುವು ಮಾಡಿಸಿಕೊಂಡಿರೊ? ನಿಮ್ಮ ಲಿಂಗ ಏನಾದುವೂ? ನಿಮ್ಮ ಸ್ಥಲದ ಲಿಂಗವ ಕಳೆದು ಪರಸ್ಥಲದ ಇಷ್ಟಲಿಂಗವ ಕಟ್ಟುವರೆ? ನಿಮ್ಮ ಸ್ಥಲ ಅಂತಸ್ಥಲವಾಯಿತು ಅಕಟಕಟಾ ಇದು ಏನಯ್ಯ! ಇದು ಎಂತಯ್ಯ!; ಒಬ್ಬರ ಕೈದು ಒಬ್ಬರದಾಯಿತು. ಎಲೆ ಪಂಡಿತಾರಾಧ್ಯರೆ, ನಿಮ್ಮ ಇಷ್ಟಲಿಂಗ ಮೂವರಿಗೆ ಸಾಹಿತ್ಯವಾದಬಳಿಕ ನಿಮಗೂ ಸಲ್ಲದು, ಮೂವರಿಗೂ ಸಲ್ಲದು, ಯಾರಿಗೂ ಸಲ್ಲದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.