Index   ವಚನ - 156    Search  
 
ಭಕ್ತಸ್ಥಲ ಘನವೆಂಬೆನೆ? ಭಕ್ತಸ್ಥಲ ಗುರುವಿನಿಂದಾಯಿತ್ತು. ಗುರುಸ್ಥಲ ಘನವೆಂಬೆನೆ? ಗುರುಸ್ಥಲ ಲಿಂಗದಿಂದಾಯಿತ್ತು. ಲಿಂಗಸ್ಥಲ ಘನವೆಂಬೆನೆ? ಲಿಂಗಸ್ಥಲ ಜಂಗಮದಿಂದಾಯಿತ್ತು. ಜಂಗಮಸ್ಥಲ ಘನವೆಂಬೆನೆ? ಜಂಗಮಸ್ಥಲ ತೀರ್ಥದಿಂದಾಯಿತ್ತು. [ತೀರ್ಥಸ್ಥಲ ಘನವೆಂದೆನೆ?] ತೀರ್ಥಸ್ಥಲ ಪ್ರಸಾದದಿಂದಾಯಿತ್ತು. ಇದು ಕಾರಣ [ಎಲೆ ನಮ್ಮ] ಕೂಡಲ ಚನ್ನಸಂಗಮದೇವಯ್ಯ, ನಿಮ್ಮ ಶರಣನಾದವನು ಮೀರಿದವನು ಬಸವಣ್ಣನ ಕರುಣದಿಂದಲಿ.