Index   ವಚನ - 168    Search  
 
ಸಹಜ ಸಹಜವೆಂತೆಂಬ ನಿರ್ಣಯವ ಕೇಳಿರಯ್ಯ; ಬೆಲ್ಲವಂತ ಮರಗಳ ಮಲ್ಲಿಗೆ ದವನ ಸೇವಂತಿಗೆ ಸಂಪಿಗೆ ಹಲಸು ನಾರಂಗ ಮಾವು ನೇರಲ ಲಿಂಬೆ ಹುಣಸೆ ಕಬ್ಬು ಬಾಳೆ ಬೇವು ಇಂತಿವುಗಳ ಸಸಿಯಂ ತಂದು, ತಾಯಿಯೆಂಬ ಭೂಮಿಯ ಮೇಲಿಟ್ಟು ಕಟ್ಟೆಯಂ ಕಟ್ಟಿ, ತಂದೆಯಂಬ ಉದಕವನರೆರೆಯಲು, ಆ ಸಸಿಯ ತಮ್ಮ ಸಹಜ ಗುಣಕ್ಕೆ ಹೋಲಲಿಲ್ಲವೆ? ತಂದೆಯಂತೆ ಉದಕವು ಬೀಜವು ಹೋತಿತ್ತು. ಇದನ್ನರಿಯದೆ ಸಹಜ ಬೀಜವೆಂತೆಂದು ಆಡುವ ಮರುಳರ ಮಾತ ಕೇಳವಾರದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.