ಸಹಜ ಸಹಜ ಎಂದೆಂಬರು ನೋಡಾ.
ಸಹಜ ಬೀಜ ಯಾವುದೆಂಬ ನಿರ್ಣಯವನರಿಯರು,
ತಾಯಿಯ ಹೋತರೆ ಸಹಜವ ಹೋತನೆಂದೆಂಬರು.
ತಂದೆಯ ಹೋತರೆ ಬೀಜ ಹೋತನೆಂದೆಂಬರು.
ಸಹಜ ಬೀಜ ಯಾವುದೆಂಬ ನಿರ್ಣಯುವನರಿಯರು.
ತಾಯಿಯ ಹೋತರೆ ಭೂಮಿಯ ಹೋತನೆಂದೆನಬೇಕು,
ತಂದೆಯ ಹೋತರೆ ಬೀಜವ ಹೋತನೆಂದನಬೇಕು.
ಯಾರನ್ನೂ ಹೋಲದಿದ್ದ ಆ ಜೀವ ಹೆಣವೆನ್ನಲಿಬೇಕು.
ತಾಯಿಯೆಂಬುದೀಗಲೆ ಭೂಮಿಯು,
ತಂದೆಯೆಂಬುದೀಗಲೆ ಇಂದ್ರಿಯವು.
ಇಂತೀ ಎಂಬತ್ನಾಲ್ಕು ಲಕ್ಷ ಜೀವರಾಶಿಯಲ್ಲಿ ಸಹಜಗುಣವು.
ಸಹಜ, ಯಾವ ಧ್ಯಾನ ಬಿತ್ತುವುದೀಗಲೆ ಸಹಜವು.
ಇಂದ್ರಿಯವೆಂಬುದೀಗಲೆ ಉದಕ, ತಂದೆಯು;
ತಾಯಿಯೆಂಬುದೀಗಲೆ ಭೂಮಿ, ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.