Index   ವಚನ - 169    Search  
 
ಶಿಶುವು ತಾಯಿಯ ಹೋತಿತು, ತಂದೆಯ ಹೋತಿತು ಎಂದೆಂಬರು ನೋಡಯ್ಯ; ಆ ಶಿಶುವಿನ ಅಂಗ ಬಣ್ಣ ರೂಪು ತಾಯಿಯನ್ನು ಹೋಲದು, ತಂದೆಯನ್ನು ಹೋಲದು, ಯಾರನ್ನೂ ಹೋಲದು; ತನ್ನನ್ನು ತಾನೇ ಹೋಲ್ವುದು. ಇದನ್ನರಿಯೆದೆ, ಆ ಜೀವು ತಾಯಿಯನ್ನು ಹೋತಿತು, ತಂದೆಯನ್ನು ಹೋತಿತು ಎಂದಾಡುವ ಮರಳರು ಮಾತ ಕೇಳಬಾರದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.