Index   ವಚನ - 170    Search  
 
ಬ್ರಹ್ಮಗೆ ಗಂಧ, ವಿಷ್ಣುವಿಗೆ ನಾಮ, ರುದ್ರಗೆ ವಿಭೂತಿ ಬ್ರಹನೆಂಬ ಶಿರಕ್ಕೆ ಗಂಧ, ವಿಷ್ಣುವೆಂಬ ಉರಕ್ಕೆ ನಾಮ, [ರುದ್ರನೆಂಬ ಹಣಿಗೆ ವಿಭೂತಿ], [ಗಂಧ ಬ್ರಹ್ಮನಿಂದಲಾಯಿತ್ತು], ನಾಮ ವಿಷ್ಣುವಿನಿಂದಲಾಯಿತ್ತು ವಿಭೂತಿಯು ರುದ್ರನಿಂದಲಾಯಿತ್ತು. ಇದಕ್ಕೆ ನಿರ್ಣಯವು- ಪಾದ ಪಾತಾಳ, ಉತ್ಪತ್ತಿ ಸ್ಥಿತಿ ಲಯಕ್ಕೆ ಬಂದಕಾರಣ ಗಂಧ, ವಿಭೂತಿ, ನಾಮ ಇಡಬೇಕಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.