Index   ವಚನ - 171    Search  
 
ಬ್ರಹ್ಮಲೋಕ, ವಿಷ್ಣುಲೋಕ, ರುದ್ರಲೋಕ ಎಂದೆಂಬರು ಬ್ರಹ್ಮಲೋಕ ವಿಷ್ಣುಲೋಕ ರುದ್ರಲೋಕ ಈಗಲೆ ಯಾವುದೆಂದರಿಯರು. ಪೃಥ್ವಿಯ ಶಿರದಲ್ಲಿ ಸ್ಥಾಪ್ಯ, ಅಗ್ನಿಯು ಉಂಗುಷ್ಠದಲ್ಲಿ ಸ್ಥಾಪ್ಯ, ಉದಕ ಉರದಲ್ಲಿ ಸ್ಥಾಪ್ಯ; ಇವು ದೇವನ ಅಂಗದಲ್ಲಿ ಸ್ಥಾಪ್ಯ, ಶಿರದಲ್ಲಿ ಬ್ರಹ್ಮ ಸ್ಥಾಪ್ಯ, ಉರದಲ್ಲಿ ವಿಷ್ಣು ಸ್ಥಾಪ್ಯ, ಉಂಗುಷ್ಠದಲ್ಲಿ ರುದ್ರ ಸ್ಥಾಪ್ಯ. ಶಿರವು ಬ್ರಹ್ಮಲೋಕವಾಯಿತು, ಹೃದಯವೆ ವಿಷ್ಣುಲೋಕವಾಯಿತು ರುದ್ರನದು ಪಾದಲೋಕವಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.