Index   ವಚನ - 172    Search  
 
ಆರ ಸಂಗದೊಳಿಪ್ಪುದನಾರು ಬಲ್ಲರು? ಆರು ಸಂಗದೊಳಿದ್ದ ಕಾರಣವು ಪರಿಚಾರಕರು ನಾಲ್ವರು ಆಚಾರ್ಯರು(ರ?) ಮಣಿಹವನೆ ಮಾಡುತ್ತಿದ್ದರು; ಯಾರುಯಾರೆಂದರೆ, ಇಂದ್ರಿಯ, ರೇವಣಸಿದ್ದೇಶ್ವರ; ಮನ, ಮರುಳಸಿದ್ದೇಶ್ವರ; ಮರುತ, ಏಕೋರಾಮೇಶ್ವರ [ನೆನಹು ಪಂಡಿತಾರಾಧ್ಯ]; ಇಂತೀ ನಾಲ್ವರು ಅರಸುಗಳು, ಅಂಗದೊಳು ಇರಲಿಕ್ಕಾಗಿ ಇರುವರು, ಅಂಗವ ಬಿಡಲಿಕ್ಕಾಗಿ ಬಿಡುವರು. ಪರಬ್ರಹ್ಮವಸ್ತು ಒಳಗಿದ್ದು ತೊಲಗದಾಗಿ, ಇಂದ್ರಿಯ ಚೈತನ್ಯ ಹೋಗಲಾಗಿ ಮನಕ್ಕೆ ಮರವೆ ಕವಿಯಲಾಗಿ ಮಾರುತ ನಿಂತಿತು. ಮಾರುತ ನಿಲ್ಲಲಿಕೆ ನೆನಹು ಬಯಲಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.