Index   ವಚನ - 177    Search  
 
ಮರ್ತ್ಯದೊಳಗಿಹ ಉತ್ತಮ[ನ] ಮಹಾತ್ಮೆ ನೀವು ಕೇಳಿರಯ್ಯ: ಜಂಗಮ ಮಹಾತ್ಮೆ ಎಂತಿಪ್ಪುದಯ್ಯ? ಜಂಗಮ ಕಂಗಳ ಗೊಂಬೆಯಂತೆ ಇಪ್ಪನಯ್ಯ. ಅಂಗವೆಲ್ಲ ವಿಕಾರ ಮಾಡಿಕೊಂಡು, ಒಬ್ಬರ ಕಾಡುವ ಬೇಡವ ಡೊಂಬನ ಜಂಗಮ ಎನ್ನಬಹುದೆ? ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.