ಬಲ್ಲತನ ಬಲ್ಲಿದತನ ಸಲ್ಲದು ಸರ್ವರಿಗೆ.
ಅಲ್ಲವಾದುದ ಅಹುದು ಮಾಡುವರೆ, ಶಕ್ತರೆ?
ಬಲ್ಲತನ ಬಲ್ಲಿದತನಕ್ಕೆ ಎಷ್ಟರ ಕೂನವಯ್ಯ?
ಎಲ್ಲವನು, ತನ್ನೊಳು ತಾನು ಅರಿತಾತನೆ ಮುಕ್ತ
ಅಲ್ಲ[ವು] ಸುಂಟಿ ಸುಂಟಿ[ಯು] ಅಲ್ಲವಾದಂತೆ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Ballatana ballidatana salladu sarvarige.
Allavāduda ahudu māḍuvare, śaktare?
Ballatana ballidatanakke eṣṭara kūnavayya?
Ellavanu, tannoḷu tānu aritātane mukta
alla[vu] suṇṭi suṇṭi[yu] allavādante kāṇā
ele nam'ma kūḍala cennasaṅgamadēvayya.