ಬಲ್ಲಬಲ್ಲಿದರು ಮುಂತಾಗಿ ಸಲ್ಲದ ಹೊನ್ನಿನಂತಾದರು.
ಅಲ್ಲವನರಿಯರು, ಎಂತು ಸಿಹಿ ಆದೀತು ಎಂಬರು.
ಬೆಲ್ಲವನರಿಯರು, ಎಂತು ಕಹಿ ಆದೀತು ಎಂಬರ.
ಕಾಲಜ್ಞಾನ ಓದಿ ಓದಿ ಕಷ್ಟನಿಷ್ಠುರರಾದರು,
ಬಿಲ್ಲನೇರಿಸಿದ ಹೆದೆಯ ನರಿ ತಿನ್ನಹೋಗಿ,
ನಾಶವಾದಂತೆ ಆಯಿತ್ತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Ballaballidaru muntāgi sallada honninantādaru.
Allavanariyaru, entu sihi ādītu embaru.
Bellavanariyaru, entu kahi ādītu embara.
Kālajñāna ōdi ōdi kaṣṭaniṣṭhurarādaru,
billanērisida hedeya nari tinnahōgi,
nāśavādante āyittu kāṇā
ele nam'ma kūḍala cennasaṅgamadēvayya.