Index   ವಚನ - 203    Search  
 
ಗುರು ಬಲ್ಲ ಗುರು ಬಲ್ಲಿದ ಎಂಬ ನರರೇನು ಬಲ್ಲರಯ್ಯ? ಗುರು ಅಲ್ಲ, ಗುರು ಅಹುದು ಎಂಬ ಸಂಶಯದೊಳು ಎಲ್ಲ. ಗುರು ಕಲಿ ಪ್ರವೇಶಕ್ಕೆ ಕ್ರಿಯ ಕಲ್ಲಾದುದು ಗುರುವೆ ಬಲ್ಲ. ಗುರುಫಲ ಫಲಿಸುವನಕ ತೆರೆಮರೆಯನಿಟ್ಟು. ಗುರುಸೊಲ್ಲು, ಷೋಡಶೋಪಚಾರ ಅಷ್ಟವಿಧಾರ್ಚನೆ. ಅಲ್ಲವಾದುದ ಅಹುದು ಮಾಡಲು ಬಲ್ಲ, ಅಹುದಾದುದ ಅಲ್ಲ ಮಾಡಲು ಬಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.