Index   ವಚನ - 206    Search  
 
ದಶಾವತಾರ ಸಂಪೂರ್ಣವಪ್ಪ ತತ್ಕಾಲಕ್ಕೆ ವೃಷಭ ಬಂದುದ ಆರು ಬಲ್ಲರಯ್ಯ? ಮಿಸುರಸ್ಥಲ ಮಾರ್ಗಕ್ಕೆ ಮೇಲು ನುಡಿದೀಕ್ಷ, ಉಸುರುವ ಉಪದೇಶಂಗಳು. ಉದಾಸಿಗಳು ಸನ್ನಿಧದಲ್ಲಿ ಪಶುಜನ್ಮದೊಳು ಪ್ರಸಂಗವ ಮಾಡಲರಿಯನು, ಅಪ್ಪುದೇನಯ್ಯ? ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.