Index   ವಚನ - 225    Search  
 
ಆಡಿತಪ್ಪುವುದ ಅಕ್ಕುಲ, ನುಡಿದು ಹುಸಿವಿದಿ ಹೊಲೆಕುಲ. ನೋಡಿ ಪರಧನ ಪರಸ್ತ್ರೀಯರ ಭ್ರಮಿಸುವುದೆ ಪಾತಕಕುಲ. ಜೇಡನಹುಳು ಬಲೆಯನೊಡ್ಡಿ ನೊಣನ ಕೆಡಹಿದಂತೆ, ಎತ್ತಣ ಕುಲವೂ? ತೋಡಿ ತೋಡಲು ಕೆಸರು, ಅದರೊಳು ತಪ್ಪದು ಒಸರು ಕೂಡಿ ಕೂಡಲು ಸಮುದ್ರವಪ್ಪುದು ನೀರು. ಹೇಡಿಗೆ ಕಲಿತನ ಅಳವಡದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.