Index   ವಚನ - 241    Search  
 
ಅಂಡಜ, ಪಿಂಡಜ, ಉದ್ವಿಜ, ಸ್ವೇದಜ ಮಂಡಲದೊಳು ಚತುರ್ವಿಧ ಮಾಯಾಮೋಹ. ಖಂಡಿತ ಆಖಂಡಿತ ತೃಪ್ತಿ ನಿತ್ಯಪ್ತಿ ನಿಃಪೂಜೆ ಅಪೂಜೆಗೆ. ಅಂಡಜ ಮೃತ್ಯುಜ, ಪಿಂಡಜ ಉದ್ಬಿಜ. ಮೃತ್ಯುಜ ಪಿಂಡಜಕ್ಕೆ ಪಿಂಡವರ್ಧನೆ ವರ್ಧನೆ. ಪಾಪಿ ಅಪಾಪಿ ಪಂಡಿತನೆಂಬ ಅಪ್ಪನಯ್ಯ, ಯೋನಿಗೆ ತೊಳಲದೆ? ಮಂಡಲದೊಳು ಅನ್ನ ಉದಕ ಉಳ್ಳನ್ನಕ್ಕೆ ಜನಿತಾರ್ಥ ತಪ್ಪುವುದೆ? ಪಂಡಿತಾರಾಧ್ಯರ ಪ್ರಸಾದ ಮಾಂಸದ ಬಾಳ್ವೆ! ಅಂಡಲೆದು ಬ್ರಹ್ಮ ವಿಷ್ಣು ರುದ್ರರು ಅನಂತ ಭವದಲ್ಲಿ ಅಖಂಡಿತ ಮಹಿಮಂಗೆ ಹದಿನಾಲ್ಕು ಭವ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.