Index   ವಚನ - 244    Search  
 
ಆಕಾರದ ವಂದನೆ ಅಲಂಕಾರ ಪ್ರಕಾರವು. ನಿರಾಕಾರವಂದನೆ ನಿಃಕಲ ನಿರಾಕಾರವು. ಆಕಾರವ ಕಂಡಾತ ಆದಿಯಲ್ಲಿ ಒಬ್ಬ ಶರಣ. ನಿರಾಕಾರವ ಕಂಡಾತ ನಿಜದಿ [ಒಬ್ಬ]ಶರಣ. ಅಂತು ಭಕ್ತಸ್ಥಲ ಪ್ರಥಮಸ್ಥಲ, ಶರಣ ಸ್ಥಲ ಪಂಚಸ್ಥಲ ಐಕ್ಯಸ್ಥಲ ಷಡುಸ್ಥಲ; ಆರು ಆಕಾರ, ನಿರಾಕಾರ ಅಂತು ಮಾರ್ಗ ಬಾರಾ ಆಕಾರ ನಿರಾಕಾರ ಅಗಣಿತಗಣಿತ, ಅತ್ಮ ಆಧ್ಯಾತ್ಮ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.