Index   ವಚನ - 250    Search  
 
ಸಟೆ ಸಾಹಿತ್ಯವಂ ಕಟ್ಟಿ. ಪಟುತರ ಸ್ವತಂತ್ರಲಿಂಗವ ಮರೆವುದು ಸದಾಚಾರವೆ? ಚಿಟಕೆ ಹಾಕಲು ಶ್ವಾನ(ಸೀನು?) ಬಂದಂತೆ, ಬಪ್ಪುದು ಶಿವಲಿಂಗವೆ? ನಿಟಿಲ[ಜ]ನರ ಎಲ್ಲ ನಿಜಗೊಳಿಸಿ, ಅನಿತ್ಯ[ರ] ನಿತ್ಯರ ಮಾಡಿ ಕರ್ಮವ ಸುಡುವ ದಿಟಲಿಂಗಸಾಹಿತ್ಯ ದ್ವಿಜಜಾತಿಗೆ ಅಪ್ಪುದೆ? ವಟವೃಕ್ಷದ ಅಡಿಯಲ್ಲಿ ಬೀಜವಿಟ್ಟಿದ್ದರೆ ದಿಟವೃಕ್ಷವಪ್ಪುದೆ? ಅಟಮಟ ಅನ್ಯಾಯಿಗೆ ಅನಾಚಾರಿಗೆ ಆಚಾರ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.