Index   ವಚನ - 252    Search  
 
ಹಿಂದಕ್ಕೆ ನಡೆದವರ ನುಡಿಯ ಮುಂದಕ್ಕೆ ಓದುವರೆ ತಾನಾರು? ಅಂದು ನುಡಿದ ನಡೆದ ನುಡಿಗಳು, ಹಿಂದೆ ಇತ್ತು ಮುಂದೆ ಯಾಕೆ[ಇಲ್ಲ]? ಮುಂದೆ ನುಡಿದು ನಡೆವ ಮಹಾತ್ಮರು ತಂದಾತ, ಅಂದು ಒಬ್ಬನೆ ಇಂದು ಒಬ್ಬನೆ. ಸಂದ ಹೊನ್ನಿಗೆ ವರಹನರಸಿವರೆ? ಸಾಕು ಆ ನೋಟ. ಅಂದು ನೋಡಿದ ನೋಟ ಕರುಹಿನ ಕರುಹಿನ ನೋಟ; ಇಂದು ನೋಡುವ ನೋಟ ಅರುಹಿನ ನೋಟ. ಕಂದನ ಕೈಯಲ್ಲಿ ಕಟ್ಟಳೆಯ ಚೀಲವನ್ನು ಕೊಟ್ಟು. ಮುಂದೆ ಈ ನೋಟಕ್ಕೆ ಸರಿಪ್ರತಿಯಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.