Index   ವಚನ - 258    Search  
 
ಜಾರಿಯ ಸ್ಥಲ ಜನರಿಗೆ ಹಿತ, ಧಾರಣ ಸ್ಥಲ ಬ್ರಹ್ಮಿಗೆ ಹಿತ. ಕಾರ್ಯವಾಸಕ್ಕೆ ಬಂದ ವಿಷ್ಣುಭಕ್ತಿ ಎಂತು ಕಾರಣವಪ್ಪಿದಯ್ಯ? ಮೂರುಯುಗದಲ್ಲಿ ನಡೆದು ನಡೆದು ಎಡವಿತ್ತು. ಮುನ್ನಲಿ ಕಲ್ಯಾಣದಲ್ಲಿ, ಲಕ್ಷದಾ ಮೇಲೆ ತೊಂಬತ್ತಾರು ಸಾವಿರದೊಳು, ತೋರಿಕೊಟ್ಟು ಗುರುಪಾದತೀರ್ಥ ಪ್ರಸಾದ ಪ್ರಾಣಲಿಂಗನದು. ಇಷ್ಟಕೆ ಕಾರ್ಯವಾಸಕೆ ಕರ್ತನ ಕಾಲ ಹಿಡಿದು ನಡೆಯಬೇಕಿತ್ತು. ಆಡಿಸ್ಯಾಡುವರ ನಮ್ಮ ನುಡಿಯ, ಸಲುವಳಿಯ ಕಾಳಿಗೆ ಕೊರಳಿಗೆ ಕಟ್ಟಿಕೊ ಎಂದು ದೂರಣ(ದೂರಿನ ?) ಮಾತಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.