ಮೂರು ಯುಗದಲ್ಲಿ ಮುತ್ತೈದರಾದ ಮೂರ್ತಿಗಳು,
ನೀವು ಕೇಳಿರಯ್ಯ:
ಮುನ್ನಲಿ ಕಲ್ಯಾಣದಲ್ಲಿ ಮುಂಡೆಯರಾದರು,
ಸೇರಿದ ಗುರುವನು ಮರೆದ ಶಿಷ್ಯರಿಗೆ ಶಿಷ್ಯರಾದರು,
ಪೂರ್ವಾಚಾರ್ಯಾರು.
ಪುನರಪಿ ಅರಿಯದೆ(ದ?) ಕಡೆಯಿಂದ ಅತೀತ ಎಡೆ
ಶೂನ್ಯವಾಯಿತ್ತು.
ಕುರುಹಿಟ್ಟುಬಂದು ಕಾರಣದಿಂದಲೆ ಮದೋನ್ಮತ್ತರಾಗಿ
ಮಾರ್ಗ ತಪ್ಪಿತು.
ಮುರಹು, ಮುದ್ರೆ, ದೀಕ್ಷೆ ಉಪದೇಶ
ಅಂದೆ ಸೆಳೆಯಿತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.