ಬಳಲಿದ ಪಾದವ ಸತ್ಕರಿಸುವುದು ಹಸ್ತ.
ಬಳಲಿ ಬಾಯಾರಿದಡೆ ಊಡುವುದು ಹಸ್ತ.
ಬಳಲಿದ ಹಸ್ತವ ಹೊತ್ತು ನಡೆವುದು ಪಾದ.
ತಾಳಿದ ಪಾದವ ತೊಳೆವುದು ಹಸ್ತ.
ಹೇಳಿದ ನಾಲಿಗೆ, ಕೇಳಿದ ಕಿವಿ, ನೋಡಿದ ಕಣ್ಣು
ಗೂಢಾರ್ಥ ಮೂರನು ಆಳಿದ ಚೈತನ್ಯ ಒಬ್ಬ.
ಒಬ್ಬರಿಗೆ ಒಂದೊಂದನು ಸತ್ಕರಿಸಿ[ಎಂದು],
ಹೇಳದೆ ಹೋಪದು ಏನು ಕಾರಣ?
ಅವಗುಣದಿಂದಲಿ ಆಳಾದವರು ಅರಸಾಪರು ಅರಿತರೆ.
ಏಳಾದರೂ ಮೇಲೆ ಎರಡಾದರೂ ಕೆಳಗೆ
ಇಂತು ಹದಿಮೂರಕ್ಕೆ ಹೇಳದೆ ಹೋದಾತ
ಸಂಗನ ಶರಣ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Baḷalida pādava satkarisuvudu hasta.
Baḷali bāyāridaḍe ūḍuvudu hasta.
Baḷalida hastava hottu naḍevudu pāda.
Tāḷida pādava toḷevudu hasta.
Hēḷida nālige, kēḷida kivi, nōḍida kaṇṇu
gūḍhārtha mūranu āḷida caitan'ya obba.
Obbarige ondondanu satkarisi[endu],
hēḷade hōpadu ēnu kāraṇa?
Avaguṇadindali āḷādavaru arasāparu aritare.
Ēḷādarū mēle eraḍādarū keḷage
intu hadimūrakke hēḷade hōdāta
saṅgana śaraṇa kāṇā
ele nam'ma kūḍala cennasaṅgamadēvayya.