Index   ವಚನ - 271    Search  
 
ಕುಲಾಚಾರವೆಂಬ ಕುಲಕರ್ಮಿಗೆ, ಶಿವಚಾರವೆಂತಪ್ಪುದಯ್ಯ? ಭವಿಯ ಸಂಪರ್ಕ ಹಿಂಗದೆ ಭಕ್ತನಪ್ಪನೆ? ಕವಲು ಇದು, ನೇಯವ ಸೂಜಿಗೆ ಕರ್ಮವಿದೂರ. ಪವಿತ್ರ ತಾ, ತನ್ನ ಮಾತ ತಾ ನಡೆಯುತ್ತ ಅವಿಚಾರಿಗೆ ಅಜ್ಞೆ ಬಹದಲ್ಲದೆ ಅನುಜ್ಞೆ ಬಹುದೆ? ಶಿವಶರಣರಿಗೆ ಶಿಲೆಯ ಅಚರಣೆ, ಕೊಳುಕೊಡೆ ಸಂಬಂಧ ದೂರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.