Index   ವಚನ - 275    Search  
 
ಗುಹೇಶ್ವರನೆಂಬ ಗೌಪ್ಯದ ಲಿಂಗವ ಬಾಹ್ಯರರು ಏನ ಬಲ್ಲರಯ್ಯ? ತತ್ವದ ಭಕ್ತಿಯ ಗ್ರಹಿಸುವರೆ, ಅಗ್ನಿ ಅಪೋಶನಗೊಂಡಂತೆ ಅಸಾಧ್ಯ ಅಸಾಧ್ಯವು. ಭಾಹ್ಯರ ಅರ್ಪಣೆ ಭಾವರ್ಪಣೆ ಅಪ್ಪುವೆ? ದೇಹಿಗಳೆಲ್ಲ ಲಿಂಗದೇಹಿಗಳಪ್ಪರೆ? ಸಮಾಧಾನ ಷಡುಸ್ಥಲದ ಮಾರ್ಗಭಕ್ತಿ, ಸಚರಾದದೊಳು ಅವಿರಳ, ಭಾವಜ್ಞಾನ ಭಕ್ತವತ್ಸಲಗಲ್ಲದೆ ಸಿಕ್ಕದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.