Index   ವಚನ - 279    Search  
 
ಜ್ಞಾನ, ವೈರಾಗ್ಯ, ಭಕ್ತಿ ತನ್ನ ತಾನಪ್ಪುದಲ್ಲದೆ ತಂತ್ರಬೋಧೆ, ನಾನಾ ವಂದನೆ, ಅನರ್ಥಯುಕ್ತಿಯ ಒಪ್ಪುವನೆ ಗುರುವು? ಬಾನವ ಮೆತ್ತಿದ ಮೃತ್ತಿಕೆಯಲ್ಲಿ ಕಾಣಾದ ಕರುಳಿನಂತೆ, ತಾನೆ ತನ್ನ ತನ್ಮಯದಿ ಸ್ವಯವ ಅರಿವುದು. ಜ್ಞಾನಕ್ಕೆ ಶಾಸ್ತ್ರ[ವು] ಆಜ್ಞಾನಕ್ಕೆ ವೈರವು, ಶಸ್ತ್ರಕ್ಕೆ ಸೈನ್ಯವು ಭುವನವಿದಕ್ಕೆ ಕುರುಹು. ಅಕೃತಿ, ಜ್ಞಾನಕ್ಕೆ ಕೊನಕ್ಕೆ ದೂರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.