Index   ವಚನ - 282    Search  
 
ಎಂತಪ್ಪುದಯ್ಯ ಭಕ್ತಿ, ಸಂತೆಯ ರೂಪು ಸಕಲ ಜನ್ಮಕ್ಕೆ? ಪಂಕ್ತಿ ಪಾದಾರ್ಚನೆಗಾಗಿ ಪಾಶ ಉದಯಿಸಿತ್ತು. ಮಂತ್ರ ಪ್ರಣಮಕ್ಕೆ ಮಾರ್ಗ ತಪ್ಪಿತ್ತು. ಅಂತರಾತ್ಮವ ಮರೆತು ಭುತಾತ್ಮವಾಯಿತ್ತು. ಇಂತರ್ಗೆ [ಅ] ಹಿಂಸೆ ವಿವೇಕ ಅವಿವೇಕವಾಯಿತ್ತು. ಚಿಂತಾಯಕ ಗುರುಗುಹೇಶ್ವರ ಚಿನ್ಮಯಸ್ವರೂಪು, ಅಂತರ್ಗೆ ಒಪ್ಪುವನೆ? ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.