Index   ವಚನ - 281    Search  
 
ಭೂಚರ ಚರಿಸುವ ಜೀವನ ಖೇಚರ ಚರಿಸವುದೇನಯ್ಯ? ಅಚಾರ ಕ್ರಿಯವುಂಟಾದವರು ಅನಾಚಾರಿಗಳಪ್ಪರೇನಯ್ಯ? ರಾಜದ್ರವ್ಯಕ್ಕೆ ಆಸ್ಕರಪಟ್ಟು ರಚನೆಯ ಪೂಜೆಯ ಮಾಳ್ಪರೆ? ತಮ್ಮ ರೂಪು ತಾವು [ಕಂಡು] ನಾಚುವಂತೆ ಆಚಾರಭ್ರಷ್ಟರು. ಖೇಚರ ಚರಿಸುವ ಆಚಾರನಿಷ್ಠೆ, ದಿಕ್ಷೆ, ಉಪದೇಶ ದಿವ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.