Index   ವಚನ - 284    Search  
 
ವೇಶ್ಯೆ ದಾಸಿ ಎಂಜಲ ತಿಂದು ಮೋಸಹೋಯಿತ್ತು ಲೋಕ ಭೂಷಣ ಹಿರಿತನ ಭುಲ್ಲಣೆ ಅಕ್ಕು ವೇಷ ಪಾಶಕ್ಕೆ ಆಶೆಗೆ ಊಸರವಳ್ಳಿಯಂತೆ ಒಂದೊಂದು ರೂಪವ ತಾಳ್ವರೆ ಈಶ್ವರ ನಿಮ್ಮ ಕೃಪೆ ಎಂತಿಪ್ಪುದಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.