Index   ವಚನ - 287    Search  
 
ಅಂಗದ ಅವಗುಣ ಹಿಂಗದೆ ಅಮಂಗಲೆ, ಭವಿಯ ಸಂಪರ್ಕ ಹಿಂಗದ ಶಿವಭಕ್ತನು. ಶೃಂಗಾರ ಹೊರಮಾಟವು ರೂಪಕ್ಕೆ ಭಸಿತ. ಅಂಗುಷ್ಠಮಾಲೆಯ ಧರಿಸಲು ಲಿಂಗಾಂಗಿ ಆಹನೆ? ಹೆಂಗೊಲೆ ಹೆರರ ಪೀಡಿಸಿ, ಹೇಸದೆ ಗಿಡಗಳ ನೋಯಿಸಿ ರಂಗಕ್ಕೆ ಭಕ್ತಿ ತಾಂಬ ರಚನೆಗೆ ಸೂಚಿಯೆ? ಭಂಗಿತ ಒಂದೊಂದು ಮಾಟ ಮರ್ಕಟನಂತೆ ಆಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.