ಮೂಲಮಂತ್ರದ ಅರಿವು,
ಮುಗ್ಧ ಸ್ವರೂಪಗಲ್ಲದೆ
ಮೂಲ ಪ್ರಬಂಧಿಗಳಿಗೆ ಸಿಕ್ಕುವುದೆ?
ಸಾಲವ ಕೊಡಬಲ್ಲ ದೊರೆ, ಕೊಳಬಲ್ಲ.
ಬೇಲಿಯೊಳು ಚೆಲ್ಲಿದ ಧಾನ್ಯವು,
ಬೆಳೆಬೆಳೆದು ಹೊಂಬಾಳೆಯಪ್ಪುದೆ?
ಮೂಲ್ಯವು, ತನ್ನೂಳು ತಿಳಿದುನೋಡುವುದು
ಮೂಲಮಂತ್ರದ ಅರಿವು.
ಸ್ಥೂಲದಲ್ಲಿ ತೆಂಗಿನ ವೃಕ್ಷವು, ಮೇಲುಗಾಯಿ
[ಒಳಗೆ] ಅರಿತು ಆರಿ ಗಟ್ಟಿಗೊಂಡಂತೆ [ಇದು].
ಸ್ಥೂಲವ ಸೂಕ್ಷ್ಮದಲ್ಲಿ ಕಾಂಬುದು ಕಾರಣ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Mūlamantrada arivu,
mugdha svarūpagallade
mūla prabandhigaḷige sikkuvude?
Sālava koḍaballa dore, koḷaballa.
Bēliyoḷu cellida dhān'yavu,
beḷebeḷedu hombāḷeyappude?
Mūlyavu, tannūḷu tiḷidunōḍuvudu
mūlamantrada arivu.
Sthūladalli teṅgina vr̥kṣavu, mēlugāyi
[oḷage] aritu āri gaṭṭigoṇḍante [idu].
Sthūlava sūkṣmadalli kāmbudu kāraṇa kāṇā
ele nam'ma kūḍala cennasaṅgamadēvayya.