Index   ವಚನ - 313    Search  
 
ಷಡುಸ್ಥಲ ನುಡಿಯಲ್ಲಿ ಸಾಧ್ಯವಪ್ಪುದೇನಯ್ಯ? ಕೊಡುವೆಡೆಗೆ ಕೊಂಬೆಡೆಗೆ ತೀರ್ಥಪ್ರಸಾದ ದೊರಕೊಂಬುದೆ? ನಡೆನುಡಿ ಚೈತನ್ಯವೆಂಬ ಅಹಂಕಾರಿಗೆ ಸೋಂಕುವುದೆ ಬಿಡಿವಚನ? (ನುಡಿವಚನ?) ಭೃತ್ಯಾಚಾರ ನಿತ್ಯಕ್ಕೆ ಅಲ್ಲದೆ, ಅನಿತ್ಯಕ್ಕೆ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.