Index   ವಚನ - 327    Search  
 
ತೀರ್ಥಪ್ರಸಾದ ತೀರ್ಥಪ್ರಸಾದವೆಂಬರು. ತ್ರಿವಿಧಗಳ್ಳರಿಗೆ ತೀರ್ಥಪ್ರಸಾದವೆಂತಪ್ಪುದಯ್ಯ? ಕೊಟ್ಟಾತ ಗುರುವಲ್ಲ, ಕೊಂಡಾತ ಭಕ್ತನಲ್ಲ. ಆಚಾರ್ಯರಿಗೆ ತೀರ್ಥಪ್ರಸಾದ ಉಂಟಾದರೆ, ಅನಾಚಾರದ ಮನೆಯ ತಿರುಗಲ್ಯಾತಕ್ಕೊ? ಭಕ್ತಂಗೆ ವಿಚಾರವೆ ಉಂಟಾದರೆ, ಆಚಾರ್ಯರ ತೀರ್ಥಪ್ರಸಾದ ಬೇಡಲ್ಯಾತಕ್ಕೂ? ಆಚಾರ್ಯರು ಶಿವಭಕ್ತಂಗೇನು ಶಿಷ್ಯರೂ ಗುರುವೂ? ಗುರುವು ಶಿಷ್ಯನೆಂಬ ಗುರುದ್ರೋಹಿಯ ಮಾತ ಕೇಳಬಾರದು ಇದು ಕಾರಣ, ಕೂಡಲ ಚನ್ನಸಂಗಮದೇವಯ್ಯ ಗುರುಶಿಷ್ಯಭಾವದೊಳು, ಆಚಾರ ಅಂಗದೊಳು, ವಿಚಾರ ಲಿಂಗದೊಳು, ತ್ರಿವಿಧ ತೀರ್ಥಪ್ರಸಾದ ನಿರ್ಜನಿತ ಜಂಗಮದೊಳು. ಸರ್ವಭಕ್ತಿ ಸ್ವಯಂಮೂಲ್ಯ ಶರಣಂಗಲ್ಲದೆ ವಿಕ್ಕವರಿಗೆ ಆಚಾರನಾಸ್ತಿ, ಭಕ್ತಿನಾಸ್ತಿ, ತೀರ್ಥ ನಾಸ್ತಿ, ಪ್ರಸಾದನಾಸ್ತಿ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.