Index   ವಚನ - 337    Search  
 
ಹುಟ್ಟಿದರು ಅನಂತ ಬ್ರಹ್ಮರು. ಹುಟ್ಟಿದರ ಅನಂತ ವಿಷ್ಣುವರು. ಹುಟ್ಟಿದರು ಅನಂತ ರುದ್ರರು. ಪಟ್ಟಾಭಿಷೇಕದಿಂದ ಪರ್ವತ ಸಖನು. ನಿಷ್ಠೆಯೊ ವರಕೃಪಾರ್ಪಿತ ಆದಿಯನಾದಿಯ ಹುಟ್ಟುವ ಹೊಂದವೆ ಜಾತಕ್ಕೆ. ತಿಟ್ಟವೆ ಹೊಂದವೆ ಜಾತಕ್ಕೆ. ತಿಟ್ಟವೆ ಭೇದ ಭೇದಗಳಿಂದಲಿ ಸೃಷ್ಠಿಯೊ ಆಕಾರನಿರ್ಮಿತ ಶೂನ್ಯಸ್ಥಲನಿತ್ತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.