Index   ವಚನ - 362    Search  
 
ತೀರ್ಥಪ್ರಸಾದ ಕೊಳಕೊಡೆ ಸಂಬಂಧವ ವ್ಯರ್ಥರೇನಬಲ್ಲರು, ವೇಷಧಾರಿಸಂಬಂಧಿಗಳು? ವಸ್ತುವೆಂತು ಇಹನೆಂಬನೆ ಸವನರಿತರೆ ಪ್ರಸ್ತಾಯಕೆ ಪರಮಗುರು. ಪಾಲಿಪ ಪ್ರಸಾದವಾಕ್ಯವ, ಸ್ಥಿರವಪ್ಪ ತೀರ್ಥವ ಅಪೂರ್ವ ಕೃಪಾದೃಷ್ಠಿ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.