Index   ವಚನ - 370    Search  
 
ನಡೆಡೊಂಕಿನಿಂದ ಲೋಕವು, ಒಡೆತನ ಆಳು ಎಂದೆಂಬರು. ನುಡಿಡೊಂಕಿನಿಂದ ಲೋಕವು, ಕೊಳುಕೊಡೆ ಕೊಳ್ಳರು. ಒಡೆತನ ನುಡಿನಡೆ ಭಾವನೆ; ಸಿಡಿಲು ಎರಗಿಸಿ ಕರೆಸುವಂತೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.