Index   ವಚನ - 40    Search  
 
ಆತ್ಮಶುದ್ಧಿ:ಗುರು ಹಸ್ತವ ಮಸ್ತಕದಲ್ಲಿ ನ್ಯಸ್ತಮಾಡಿದನಾಗಿ. ಸ್ಥಾನಶುದ್ಧಿ:ಶಿವಲಿಂಗವಿದ್ದುದೇ ಅವಿಮುಕ್ತಕ್ಷೇತ್ರವಾಗಿ. ದ್ರವ್ಯಶುದ್ಧಿ:ಶಿವಲಿಂಗಸನ್ನಿಧಿಮಾತ್ರ ಪವಿತ್ರೀಕೃತವಾಗಿ. ಮಂತ್ರಶುದ್ಧಿ:ಹರಮಂತ್ರಮಯವಾಗಿ ಅಂಗಶುದ್ಧಿ:ನಿರ್ಮಳ ನಿರುಪಮ ಸತ್ಯ[ಸ್ಯ]ಸತ್ಯ ತಾನಾಗಿ. ಇಂತು ಪಂಚಶುದ್ಧಿ ಎಂದರಿದು, ಪ್ರಾಣಲಿಂಗಸಂಬಂಧಿಯಾಗಿಪ್ಪುದೇ ಆಗಮ. ಬೇರೆ ಆಗಮವಿಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.