ಬಳ್ಳ ಬೇವಿನಕೊರಡು ಆಡಿನಹಿಕ್ಕೆ ಲಿಂಗವೆ?
ಸದ್ಭಾವದಿಂ ಭಾವಿಸಿ ಲಿಂಗವ
ಮಾಡಿ ಸದ್ಭಕ್ತರಾದರು ಪುರಾತನರು.
ಕೇವಲ ಪರಶಿವಮೂರ್ತಿಲಿಂಗವು.
ಶ್ರೀಗುರು ಪರಶಿವನು, ಲಿಂಗವು ಪರಶಿವನು,
ಜಂಗಮವು ಪರಶಿವನು,
ದಿಟವ ಸೆಟೆಮಾಡಿ ನರಕಕ್ಕಿಳಿಯದಿರಿ, ಅಭಕ್ತರಾಗದಿರಿ.
ಇವಂದಿರಂತಿರಲಿ ತಮ್ಮ ಬಲ್ಲಂಗತಾಲಿ.
ಮನವೇ ನಾ ನಿಮ್ಮ ಬೇಡಿಕೊಂಬೆನು ನಂಬು ಕಂಡಾ.
ಸದ್ಭಾವದಿಂ ಲಿಂಗವ ನಂಬಲು ಭಕ್ತಿ ಸದ್ಭಕ್ತಿ
ಕೇವಲ ಮುಕ್ತಿಯಪ್ಪುದು ನೆರೆ ನಂಬು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Baḷḷa bēvinakoraḍu āḍinahikke liṅgave?
Sadbhāvadiṁ bhāvisi liṅgava
māḍi sadbhaktarādaru purātanaru.
Kēvala paraśivamūrtiliṅgavu.
Śrīguru paraśivanu, liṅgavu paraśivanu,
jaṅgamavu paraśivanu,
diṭava seṭemāḍi narakakkiḷiyadiri, abhaktarāgadiri.
Ivandirantirali tam'ma ballaṅgatāli.
Manavē nā nim'ma bēḍikombenu nambu kaṇḍā.
Sadbhāvadiṁ liṅgava nambalu bhakti sadbhakti
kēvala muktiyappudu nere nambu,
uriliṅgapeddipriya viśvēśvarā.