Index   ವಚನ - 259    Search  
 
ಲಿಂಗಾರ್ಚನೆಯ ಮಾಡಿ ಪ್ರಸಾದವ ಪಡೆದು, ಪ್ರಸಾದವ ಭೋಗಿಸುವುದು. ಅಲ್ಲಲ್ಲಿಗೆ ಹೋಗಿ ತೋಳಲಿ, ಬಳಲಿ, ಕಲ್ಲು ತಾಗಿದ ಮಿಟ್ಟೆಯ[ವೊ]ಲಾಗದೆ ಎಲೆ ಎಲೆ ಜಡಜೀವನೆ ಮತ್ತೆಲ್ಲಿಯೂ ಅರಸ[ದಿರು]. ದೇವರೆಂಬ ಬಲ್ಲಹನ ಬಿಟ್ಟು ಕಟಕವಿಹುದೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಶ್ರಿಪಾದದಲ್ಲರಸಿಕೊ ದೇವರೆಂಬವರನು.