Index   ವಚನ - 269    Search  
 
ವಿಶ್ವಾಸವೆ ಭಕ್ತಿ, ಗುರುಲಿಂಗಜಂಗಮವೊಂದೆಂದರಿವುದೆ ಜ್ಞಾನ, ತ್ರಿವಿಧದಲ್ಲಿ ನಿರ್ವಂಚನೆಯೆ ವೈರಾಗ್ಯ, ಪ್ರಸಾದವೆ ಮುಕ್ತಿ. ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.