Index   ವಚನ - 281    Search  
 
ಎರಡಿಲ್ಲದ ಭೂಮಿಯಲ್ಲಿ ಬಯಲ ಪಟ್ಟಣ. ಆ ಪಟ್ಟಣಕ್ಕೆ ಒಡೆಯನಾದ ನಿರಂಜನನೆಂಬ ರಾಜನು ಸಂಗವಿಲ್ಲದ ಸ್ತ್ರೀಸಂಯೋಗದಿಂ ಶಿಶುವ ಪಡೆದು, ಆ ಶಿಶು ತಂಗಿಯನೊಡಗೂಡಿ ಪಂಚಮುಖವುಳ್ಳಾತನ ಪಡೆದು, ಆ ಪುತ್ರನ ಮಮಕಾರಶಕ್ತಿಯಿಂದ ಮೂವರು ಪುಟ್ಟಿದರು. ಆ ಮೂವರು ಮೂರುಪುರವ ನಿರ್ಮಿಸಿದರು. ಆ ಮೂರುಪುರ ಈರೈದು ನಾಲ್ಕು ದೇಶ, ಆ ದೇಶದಲ್ಲಿ ಎರಡು ಕುಲ, ಎಂಬತ್ತುನಾಲ್ಕು ಕುಲವಾಯಿತ್ತು. ಇಂತೀ ಎಲ್ಲವು ಯಾತರಿಂದಾಯಿತ್ತೆಂದರಿದು ಅದ ನುಂಗಿ ತಾನಳಿದುಳಿದು ಇರ್ಪಾತನೇ ಶರಣ. ಅಂಗಲಿಂಗಸಂಬಂಧಿ ಸರ್ವಾಂಗಲಿಂಗಿಯೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.