ಗಜಿಬಿಜಿಯೆಂಬ ಪಟ್ಟಣದ ಗುಜ್ಜದೇವಿ ಎಂಬ ಸ್ತ್ರೀಯಳ
ಕೋತಿವಿಲಾಸವ ಕಂಡು,
ಶಿಕಾರಿಗೆ ಬಂದ ರಾಜಕುಮಾರನು ಮರುಳಾಗಿರುವದ
ಅರಸು ಕಂಡು ಬಂದು
ಮೂರು ಕಲ್ಲಾರು ಕೋಲಿನಿಂದ ಹೊಡೆದು,
ಪುತ್ರನ ಕೊಂದು ತಾ ಸಾಯಲು,
ಗಜಿಬಿಜಿಪಟ್ಟಣ ಸುಟ್ಟು, ಗುಜ್ಜದೇವಿಯಳಿದು,
ಕೋತಿವಿಲಾಸವಡಗಿತ್ತು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.