Index   ವಚನ - 448    Search  
 
ಮಣ್ಣಪಡಿಯಿಂದ ಮರ್ತ್ಯವನಳೆದು, ಸಣ್ಣಪಡಿಯಿಂದ ನೀರನಳೆದು, ಹಿರಿಯ ಪಡಿಯಿಂದ ಹಣವನಳೆದು, ಮೂರು ಪಡಿಯನೊಡದು, ಬಣ್ಣದ ಪಡಿಯಿಂದ ಹಿರಿಖಂಡುಗದ ಬತ್ತವನಳೆದು, ಖಂಡುಗ ಪಡಿಯನುಂಡು, ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.