Index   ವಚನ - 10    Search  
 
ಈಶ್ವರಮೂರ್ತಿಯ ಕರಕಮಲಕ್ಕೆ ತಂದಲ್ಲಿ, ಕಣ್ಮನ ಮೂರ್ತಿಧ್ಯಾನ ಹೆರೆಹಿಂಗದಕ್ಕರಿಂದ ಭಾವ ಭ್ರಮಿಸದೆ, ಚಿತ್ತ ಸಂಚರಿಸದೆ ಮನ ವಚನ ಕಾಯದಲ್ಲಿ ಭಿನ್ನ ಭಾವವಿಲ್ಲದೆ ಪೂಜಿಸುವ ಕೈಯೂ ತಾನಾಗಿ, ಅರಿದ ಮನವೂ ತಾನಾಗಿ, ಹೊತ್ತಿಪ್ಪ ಅಂಗದ ನೆಲೆಯೂ ತಾನಾಗಿ ಹೆರೆಹಿಂಗದೆ ಪೂಜೆಯ ಮಾಡುತಿರ್ಪ ಆತನ ಅಂಗವೆ ಲಿಂಗ, ಆತನಿದ್ದುದೆ ಅವಿಮುಕ್ತಿ ಕ್ಷೇತ್ರ. ಇಂತಪ್ಪ ಮಹಾಮಹಿಮ ನಾರಾಯಣಪ್ರಿಯ ರಾಮನಾಥ ತಾನು ತಾನೆ.