Index   ವಚನ - 104    Search  
 
ಮನ್ಯ ಓಡಿ ಆಹಾ! ಮನ್ಯ ನಿಂದು ಸರಹೆತ್ತ ಮನಕ್ಕೆ ಸರಾದಿವೊಡೆಯನಾಗಿ ಸರಶಬ್ದದಾ ಮಥನದಾ ಮಥಂತಿ ಮಥನದಾಸರ ಮಥನದಿಂದ ಲಿಂಗ ಉತ್ಪತ್ಯ, ಜಂಗಮ ಉತ್ಪತ್ಯ, ಅನುಭಾವ ಉತ್ಪತ್ಯ. ಸರದಿಂದ ನಿರವಯ, ನಿರವಯದಿಂದ ಸರ. ಸರವಯದಿಂದೆರಡರನ್ವಯದ ಆಧಾರವನು ತನ್ನ ಹೃದಯಕ್ಕೆ ತಂದು ನಿಂದಿತ್ತೆ ನಿರವಯವು. ಇಂತೆಂದಿತ್ತೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.