Index   ವಚನ - 80    Search  
 
ನಿಜದಿಂದ ಕ್ಷತ್ರಿಯನೆಂದು ನಿಜವನರಿಯದ ಕರ್ಣನ ವ್ಯಾಧಭಾಧೆ ಬಿಡದಂತೆ ತಾನು ತನ್ನ ನಿಜವನರಿದಡೂ ಜಾತಿಯಾಶ್ರಮ ಗುಣಧರ್ಮ ಜೀವಾದಿ ಭೇದಂಗಳೊಳಗಾದ ಮಾಯಾಮಯಂಗಳೆಂಬ ಮುನ್ನಿನ ಭ್ರಮೆಗಳ ಬಿಡಲರಿಯದ ಬಡ ಮನುಜರೆಲ್ಲರೂ ನಿಜಗುಣನ ನಿಜಭಾವದಲೂ ನಿಲ್ಲದವಂಗೆ ನಿಜಸುಖವು ಸಾಧ್ಯವಪ್ಪುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.