Index   ವಚನ - 152    Search  
 
ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ ಇಲ್ಲದ ಶಂಕೆಯನುಂಟೆಂಬನ್ನಕ್ಕ ಅದಲ್ಲಿಯೇ ರೂಪಾಯಿತ್ತು. ಹೇಡಿಗಳನೇಡಿಸಿ ಕಾಡಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ.