Index   ವಚನ - 93    Search  
 
ಅಯ್ಯಾ ಎನಗೆ ರುದ್ರಾಕ್ಷಿಯೇ ಪುಣ್ಯದ ಪುಂಜ ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಭಾಗ್ಯದ ನಿಧಿಯು ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಸತ್ಯದ ಸದನ ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ನಿತ್ಯದ ನಿಲುವು ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಭಕ್ತಿಯ ಬೆಳಗು ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಮುಕ್ತಿಯ ಸೋಪಾನ ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಶಕ್ತಿಯ ಬಲವು ನೋಡಾ. ಇಂತಪ್ಪ ರುದ್ರಾಕ್ಷಿಯ ಎನ್ನಂತರಂಗ ಶುದ್ಧವಾಗಿ ಅವಿರಳಭಕ್ತಿಯಿಂದ ಧರಿಸಿ ನಿಶ್ಚಿಂತ ನಿಭ್ರಾಂತನಾಗಿರ್ದೆನಯ್ಯಾ ಅಖಂಡೇಶ್ವರಾ!