Index   ವಚನ - 94    Search  
 
ಪಂಚಾಕ್ಷರಿಯೆಂದಡೆ ಪರತತ್ವವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಪರವಸ್ತುವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಪರಬ್ರಹ್ಮವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಪರಮೇಶ್ವರನ ನಿಜನಾಮವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ. ಇಂತಪ್ಪ ಪಂಚಾಕ್ಷರಿಮಂತ್ರವ ಹಗಲಿರುಳೆನ್ನದೆ ಸದಾ ಸನ್ನಿಹಿತನಾಗಿ ಜಪಿಸಿದಾತನು ಅನಂತ ಪಾತಕಂಗಳ ಮೀರಿ ಪರಮಪದವನೈದುತಿಪ್ಪನು ನೋಡಾ ಅಖಂಡೇಶ್ವರಾ.