Index   ವಚನ - 107    Search  
 
ಶಿವಭಕ್ತಿ ಶಿವಜ್ಞಾನ ಶಿವನಲ್ಲಿ ವಿಶ್ವಾಸವಮಾಡಿದ ಲಿಂಗಾಂಗಸಂಬಂಧವನುಳ್ಳ ಸದ್ಭಕ್ತಮಹೇಶ್ವರರು ಇದ್ದ ಠಾವೆಲ್ಲ ಶಿವಕ್ಷೇತ್ರ, ಅವರು ಸುಳಿದ ಸುಳಿವೆಲ್ಲ ಜಗತ್ಪಾವನ, ಅವರು ನಿಮಿಷ ನಿಮಿಷಾರ್ಧ ಕುಳಿತ ನೆಲವೆಲ್ಲ ಶಿವನ ಕೈಲಾಸ ನೋಡಾ! ಅದೆಂತೆಂದೊಡೆ: ಸ್ಕಂದಪುರಾಣೇ- ಯತ್ರ ತಿಷ್ಠಂತಿ ಲಿಂಗಾಂಗಸಂಬಂಧೀಶಪರಾಯಣಃ | ನಿಮಿಷಂ ನಿಮಿಷಾರ್ಧಂ ವಾ ತತ್ರ ಶಿವಕ್ಷೇತ್ರಮುಚ್ಯತೇ ||'' ಮತ್ತಂ, ಪಾದಾಗ್ರರೇಣವೋ ಯತ್ರ ಪತಂತಿ ಶಿವಯೋಗಿನಾಮ್ | ತದೇವ ಸದನಂ ಪುಣ್ಯಂ ಪಾವನಂ ಶಿವಮಂದಿರಮ್ ||'' ಎಂದುದಾಗಿ, ಇಂತಪ್ಪ ಸದ್ಭಕ್ತ ಮಹೇಶ್ವರರ ಘನವ ನಾನೇನೆಂಬೆನಯ್ಯ ಅಖಂಡೇಶ್ವರಾ.